ಕರ್ನಾಟಕದ ಶಾಲೆಗಳ ಸುಧಾರಣೆಗೊಂದು ಪ್ರಾಮಾಣಿಕ ಪ್ರಯತ್ನ

ಶಾಲೆಗಳಲ್ಲಿನ ಜೀರ್ಣಾವಸ್ಥೆಯ ಕಟ್ಟಡಗಳು, ಮೂಲಭೂತ ಸೌಕರ್ಯಗಳ ಅಭಾವ ಹಾಗೂ ಮಕ್ಕಳ ಮೇಲಿನ ದೈಹಿಕ ಅಥವಾ ಮಾನಸಿಕ ಕಿರುಕುಳದ ಕುರಿತು ಈ ಆಪ್‌ನಲ್ಲಿ ದೂರು ನೀಡಬಹುದು. ವರದಿಗಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವ ಈ ಅಭಿಯಾನದಲ್ಲಿ ದಯವಿಟ್ಟು ನೈಜ ಮಾಹಿತಿಯನ್ನು ಒದಗಿಸಿ. ಕೇವಲ ದೂರುಗಳಷ್ಟೇ ಅಲ್ಲ, ಇದು ದಾನಿಗಳು ಹಾಗೂ ಸಹಾಯ ಮಾಡಲು ಇಚ್ಚಿಸುವ ಸಹೃದಯಿಗಳನ್ನು ಸಂಪರ್ಕಿಸುವ ಸೇತುವಾಗಿ ಕಾರ್ಯ ನಿರ್ವಹಿಸುತ್ತದೆ. ಶಾಲೆಗಳು ಕೂಡ ಇಲ್ಲಿ ತಮ್ಮ ಸಮಸ್ಯೆಗಳನ್ನು ಸಾರ್ವಜನಿಕಗೊಳಿಸಬಹುದು.